== ಭಾರತದ ಸಂವಿಧಾನ ರಚನಾ ಸಭೆಯ ಮತ್ತು ಸಮಿತಿಗಳ ಸದಸ್ಯರು == === ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ === ಪಂಡಿತ್ ಜವಹರಲಾಲ್ ನೆಹರೂ, ಸರ್ದಾರ್ ಪಟೇಲ್, ಮೌಲಾನ ಆಜಾದ್, , ಡಾ. ಬಾಬು ರಾಜೇಂದ್ರ ಪ್ರಸಾದ್, ಸಿ. ರಾಜಗೋಪಾಲಚಾರಿ ಶರತ್ ಚಂದ್ರ ಬೋಸ್ ಸತ್ಯೇಂದ್ರ ನಾರಾಯಣ ಸಿನ್ಹಾ ರಫಿ ಅಹಮದ್ ಕಿದ್ವಾಯಿ ಅಸಫ್ ಅಲಿ ಶ್ಯಾ,ಮಪ್ರಸಾದ ಮುಖರ್ಜಿ, ಅದ್ಯಕ್ಷರು, ಹಿಂದೂ ಮಹಾಸಭಾ ರಾಜಕುಮಾರಿ ಅಮೃತ್ ಕೌರ್, ಆರೋಗ್ಯ ಸಚಿವರು ಹಂಸ ಮೆಹ್ತಾ, ಅದ್ಯಕ್ಷರು, ಅಖಿಲ ಭಾರತ ಮಹಿಳಾ ಮಂಡಳ ಪ್ರೊ.. ಎನ್.ಜಿ.ರಂಗಾ ಕೈಲಾಸನಾಥ ಕಾಟ್ಜು ಟಿ.ಟಿ.ಕೃಷ್ಣಮಾಚಾರಿ ದುರ್ಗಾ ಬಾಯಿ ದೇಶಮುಖ್ ಕೆ.ಎಮ್.ಮುನ್ಶಿ ಪ್ರಾಂಕ್ ಅಂತೋಣಿ ಸರ್ವೆಪಲ್ಲಿ ರಾಧಾಕೃಷ್ಣನ್ ಡಾ.ಜೋನ್ ಮಥಾಯಿ ಪ್ರತಾಪ ಸಿಂಗ್ ಕೈರೋನ್ ಪ್ರೊ. ಶಿಬ್ಬನ್ ಲಾಲ್ ಸಕ್ಸೇನಾ ಆರ್.ಕೆ.ಷಣ್ಮುಖ ಚೆಟ್ಟಿ ಬಾಬು ಜಗಜೀವನ ರಾಮ್, ಅದ್ಯಕ್ಶರು, ಪಂಡಿತ ಗೋವಿಂದ ವಲ್ಲಭ ಪಂತ್, , ಮಿನೂ ಮಸಾನಿ ರೇಣುಕಾ ರಾಯ್ ಪುರುಷೋತ್ತಮ ದಾಸ್ ಟಂಡನ್ ಮಹಾವೀರ್ ತ್ಯಾಗಿ ಥಾಕೂರ್ ದಾಸ್ ಭಾರ್ಗವ ಭಗವಾನ್ ದಾಸ್ ಫಿರೋಜ್ ಗಾಂಧಿ ಬಿ.ಶಿವರಾವ್ ಜೈರಾಮ್ ದಾಸ್ ದೌಲತ್ ರಾಮ್ ಅನ್ನಿ ಮಸ್ಕರೇನಸ್ ಭೋಗರಾಜ್ ಪಟ್ಟಾಭಿ ಸೀತಾರಾಮಯ್ಯ ಕಾಮರಾಜ್ ಅಮ್ಮು ಸ್ವಾಮಿನಾಥನ್ ಪೂರ್ಣಿಮ ಬ್ಯಾನರ್ಜಿ ವಿಜಯಲಕ್ಶ್ಮೀ ಪಂಡಿತ್ ಸರೋಜಿನಿ ನಾಯ್ಡು ಜೈಪಾಲ್ ಸಿಂಗ್ ಮುಂಡ ಜಗಜೀವನ್ ರಾಮ್ ದಾಕ್ಷಾಯಿಣಿ ವೇಲಾಯುಧನ್ ರೆವೆರಂಡ್ ಜೆರೋಮ್ ಡಿ'ಸೊಜಾ ರೆವೆರೆಂಡ್ ಜೆಜೆ ಎಮ್ ನಿಕೋಲಾಸ್ ರಾಯ್ ಗೋಪೀನಾಥ್ ಬೊರ್ಡೋಲೋಯ್ ಮಾಲತಿ ಚೌಧುರಿ ಲೀಲಾ ರಾಯ್ ಬಿಶ್ವನಾಥ್ ದಾಸ್, ಜೀವತ್‌ರಾಮ್ ಕೃಪಲಾನಿ ಸುಚೇತಾ ಕೃಪಲಾನಿ ಹರೇಂದ್ರ ಕುಮಾರ್ ಮುಖರ್ಜಿ ಗೋಪೀ ಕೃಷ್ಣ ವಿಜಯ್ ವಾರ್ಗೀಯ ಪಂಡಿತ್ ರಘುನಾಥ ವಿನಾಯಕ ಧುಳೇಕರ್, , 1952, === ಮುಸ್ಲಿಂ ಲೀಗ್ === ಇವರು ಪಾಕಿಸ್ತಾನ ವಿಭಜನೆಯ ನಂತರ ರಾಜಿನಾಮೆ ನೀಡಿದರು. ಬೇಗಂ ಐಜಾಜ್ ರಸೂಲ್ ಮೌಲಾನಾ ಹಸ್ರತ್ ಮೊಹಾನಿ ಖಾಜಿ ಸೈಯದ್ ಕರಿಮುದ್ಧೀನ್ ಚೌಧುರಿ ಖಾಲಿಕುಜ್ಜಮನ್ ನಾಸಿರುದ್ಧೀನ್ ಅಹಮದ್ ಜಡ್.ಎಚ್.ಲಾರಿ ಮೊಹಮ್ಮದ್ ಸಾದುಲ್ಲಾ ಅಜೀಜ್ ಅಹಮದ್ ಖಾನ್ ಮೌಲಾನಾ ದಾವುದ್ ಬಜ್ನಾವಿ === ಪರಿಶಿಷ್ಟ ಜಾತಿ ಸಂಘಟನೆ === ಡಾ. ಅಂಬೇಡ್ಕರ್ ಹಾಗು ಡಾಕ್ಟರ್ ಬಾಬು ಜಗಜೀವನ್ ರಾಮ್ ಜಿ === ಅಕಾಲಿಗಳು === ಸರ್ದಾರ್ ಹುಕುಂ ಸಿಂಗ್ === ಕಮ್ಯುನಿಸ್ಟರು === ಸೋಮನಾಥ್ ಲಾಹಿರಿ === ಹಿಂದೂ ಮಹಾಸಭಾ === ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ === ಕರಡು ಸಮಿತಿ === ಸಂವಿಧಾನದ ಕರಡು ಸಮಿತಿಗೆ ಡಾ. ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿ, ಅವರಿಗೆ ಸಹಕರಿಸಲು 1947ರ ಆಗಸ್ಟ್ 29 ರಂದು ಏಳು ಜನ ಸದಸ್ಯರುಗಳನ್ನು ನೇಮಿಸಲಾಯಿತು. 29 ಆಗಸ್ಟ್ 1947 ರಂದು:ಅಧ್ಯಕ್ಷರಾಗಿ ನೇಮಕಗೊಂಡ ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಕರಡು ಸಮಿತಿ. ಸಮಿತಿಯ ಇತರ 6 ಸದಸ್ಯರು:ಕೆ.ಎಂ.ಮುನ್ಶಿ, ಮುಹಮ್ಮದ್ ಸದುಲ್ಲಾ, ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್, ಗೋಪಾಲ ಸ್ವಾಮಿ ಅಯ್ಯಂಗಾರ್, ಖೈತಾನ್, ಮಿಟ್ಟರ್. (ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಕ್ಷರು, ಇತರ ಸದಸ್ಯರೊಂದಿಗೆ ಭಾರತೀಯ ಸಂವಿಧಾನದ ಕರಡು ಸಮಿತಿ. ಶ್ರೀ. ಎನ್. ಮಾಧವರಾವ್, ಸಯ್ಯದ್ ಸದುಲ್ಲಾ, ಡಾ. ಅಂಬೇಡ್ಕರ್ (ಅಧ್ಯಕ್ಷರು), ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸರ್. ಬೆನೆಗಲ್ ನರಸಿಂಗ್ ರಾವ್; ಎಡದಿಂದ ನಿಂತಿರುವುದು - ಶ್ರೀ. .. ಮುಖರ್ಜಿ, ಜುಗಲ್ ಕಿಶೋರ್ ಖನ್ನಾ ಮತ್ತು ಕೇವಲ್ ಕೃಷ್ಣನ್. - ಆಗಸ್ಟ್ 29, 1947) 16 ಜುಲೈ 1948 ರಂದು: ಹರೇಂದ್ರ ಕೂಮರ್ ಮುಖರ್ಜಿ ವಿ. ಟಿ. ಕೃಷ್ಣಮಾಚಾರಿ ಅವರೊಂದಿಗೆ ಸಂವಿಧಾನ ಸಭೆಯ (ಎರಡನೇ) ಉಪಾಧ್ಯಕ್ಷರಾಗಿ ಆಯ್ಕೆಯಾದರು 1949 ನವೆಂಬರ್ 26 ರಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ರಾಜೇಂದ್ರಪ್ರಸಾದ್‍ರು ಮಾತನಾಡುತ್ತಾ “...ಅಧ್ಯಕ್ಷೀಯ ಸ್ಥಾನದಲ್ಲಿ ಕುಂತು, ದಿನನಿತ್ಯದ ನಡಾವಳಿಕೆಗಳನ್ನು ಗಮನಿಸಿದ್ದೇನೆ.. ನನ್ನ ಅರಿವಿಗೆ ಬಂದಿದ್ದೇನೆಂದರೆ... ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರು ತಮ್ಮ ಅನಾರೋಗ್ಯದ ಹೊರತಾಗಿಯೂ ಅದೆಂತಹ ಅಪರೂಪದ ಶ್ರದ್ದೆ ಮತ್ತು ಉತ್ಸಾಹದಿಂದ ಕೆಲಸಮಾಡಿದ್ದಾರೆ...” ಎಂದು ಶ್ಲಾಘಿಸಿದರು. ಆಗ ಇಡೀ ಪಾರ್ಲಿಮೆಂಟ್ ಚಪ್ಪಾಳೆ ತಟ್ಟಿ ಅವರ ಮಾತನ್ನು ಸ್ವಾಗತಿಸಿತು. ಕರಡು ಸಮಿತಿಯ ಉಪಾಧ್ಯಕ್ಷರಾದ ಟಿ.ಟಿ.ಕೃಷ್ಣಮಾಚಾರಿಯವರು ಅವರು ಸಂಸತ್ತಿನಲ್ಲಿ ಈರಿತಿ ಹೇಳಿದರು. ಟಿ.ಟಿ.ಕೆ ಸಂಸತ್ತಿನಲ್ಲಿ “..ಡಾ. ಬಿ. ಆರ್. ಅಂಬೇಡ್ಕರ್‍ ರವರ ಅಧ್ಯಕ್ಷತೆಯಲ್ಲಿ ನನ್ನನ್ನು ಸೇರಿದಂತೆ ಏಳು ಸದಸ್ಯರನ್ನು ನೇಮಿಸಿದ್ದೀರಿ ಅವರಲ್ಲೊಬ್ಬರು ರಾಜೀನಾಮೆ ನೀಡಿದರು, ಒಬ್ಬರು ಅಕಾಲ ಮರಣಹೊಂದಿದರು, ಒಬ್ಬರು ಸ್ವಂತ ಕೆಲಸಗಳಿಗಾಗಿ ಅಮೆರಿಕದಲ್ಲೇ ಉಳಿದರು, ಒಬ್ಬರು ರಾಜಕೀಯ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡರು ಇಬ್ಬರು ಅನಾರೋಗ್ಯದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಉಳಿಯಬೇಕಾಯಿತು ಕೊನೆಗೆ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರೊಬ್ಬರ ಮೇಲೆಯೇ ಭಾರತ ಸಂವಿಧಾನ ರಚಿಸುವ ಪೂರ್ಣ ಜವಾಬ್ದಾರಿ ಬಿದ್ದಿತು. ಅವರಿಗೆ ಕೃತಜ್ಞರಾಗಿರಬೇಕು” == ನೋಡಿ == ಭಾರತ ಗಣರಾಜ್ಯದ ಇತಿಹಾಸ ಭಾರತದ ಸಂವಿಧಾನ == ಉಲ್ಲೇಖ ==